-
Learn Kannada
-
Learning Path
-
Resources
-
Videos
-
Documentation
-
Other
- Articles coming soon
PRAYERS ಪ್ರಾರ್ಥನೆ
ತಾಯಿ ಶಾರದೆ ಲೋಕ ಪೂಜಿತೆ
ಜ್ಞಾನದಾತೆ ನಮೋಸ್ತುತೆ
ಪ್ರೇಮದಿಂದಲಿ ಸಲಹು ಮಾತೆ
ನೀಡು ಸನ್ಮತಿ ಸೌಖ್ಯದಾತೆ
ಅಂಧಕಾರವ ಓಡಿಸು
ಜ್ಞಾನಜ್ಯೋತಿಯ ಬೆಳಗಿಸು
ಹೃಧಯ ಮಂದಿರದಲ್ಲಿ ನೆಲೆಸು
ಚಿಂತೆಯ ಅಳಿಸು
ಶಾಂತಿಯ ಉಳಿಸು
Taayi Sharade Loka Poojite
Jnaanadaate Namostute
Premadindali Salahu Maate
Needu Sanmati Saukhyadaate
Andhakaarava Odisu
Jnaanajyotiya Belagisu
Hrudhaya Mandiradalli Nelesu
Chinteya Alisu Shaantiya Ulisu
Ninna Madilina Makkalamma
Ninna Nambida Kandaramma
Ninna Karuneya Belakalemma
Baalanu Belagamma
Namma Korike Aalisamma
Olle Maatugalaadisu
Olle Kelasava Maadisu
Olle Daariyalemma Nadesu
Vidyeya Kalisu Aase Pooraisu
ನಿನ್ನ ಮಡಿಲಿನ ಮಕ್ಕಳಮ್ಮ
ನಿನ್ನ ನಂಬಿದ ಕಂದರಮ್ಮ
ನಿನ್ನ ಕರುಣೆಯ ಬೆಳಕಲೆಮ್ಮ
ಬಾಳನು ಬೆಳಗಮ್ಮ
ನಮ್ಮ ಕೋರಿಕೆ ಆಲಿಸಮ್ಮ
ಒಳ್ಳೆ ಮಾತುಗಳಾಡಿಸು
ಒಳ್ಳೆ ಕೆಲಸವ ಮಾಡಿಸು
ಒಳ್ಳೆ ದಾರಿಯಲೆಮ್ಮ ನಡೆಸು
ವಿದ್ಯೆಯ ಕಲಿಸು
ಆಸೆ ಪೂರೈಸು
ಸ್ವಾಮಿ ದೇವನೆ ಲೋಕ ಪಾಲನೆ
ಸ್ವಾಮಿದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತುತೇ|
ಪ್ರೇಮದಿಂದಲಿ ನೋಡು ನಮ್ಮನು ತೇ ನಮೋಸ್ತು ನಮೋಸ್ತುತೇ||
ನೇಮಿಸೆಮ್ಮೊಳು ಧರ್ಮಕಾರ್ಯವ ತೇ ನಮೋಸ್ತು ನಮೋಸ್ತುತೇ|
ಕ್ಷೇಮದಿಂದಲಿ ಪಾಲಿಸೆಮ್ಮನು ತೇ ನಮೋಸ್ತು ನಮೋಸ್ತುತೇ||
ದೇವ ದೇವನೆ ಹಸ್ತ ಪಾದಗಳಿಂದಲೂ ಮನದಿಂದಲೂ|
ನಾವು ಮಾಡಿದ ಪಾಪವೆಲ್ಲವ ಹೋಗಲಾಡಿಸು ಬೇಗನೆ||
ಕಾವರಿಲ್ಲವು ನಿನ್ನ ಬಿಟ್ಟರೆ ಸೂರ್ಯನೇ ಜಗದೀಶನೇ|
ಜೀವಕೋಟಿಯು ನಿನ್ನ ಈ ಬೆಳಕಿಂದ ಜೀವಿಪುದಲ್ಲವೆ||
ರಾತ್ರೆನಿದ್ದೆಯ ಗೈವ ಕಾಲದಿ ನೀನೆ ನಮ್ಮನು ಕಾದೆಯೈ|
ಮಿತ್ರನೆಂಬುವ ನಾಮಧೇಯವು ಸತ್ಯವಾಯಿತು ನಿನ್ನೊಳು||
ಸ್ತೋತ್ರ ಮಾಡುವ ಹಾಗೆ ನಿನ್ನನ್ನು ಹಕ್ಕಿಗಳ್ ದನಿಗೈವವೈ|
ಚಿತ್ರಭಾನುವೆ ನೋಡಿ ನಿನ್ನನದೆಲ್ಲಿ ಪೋದುದೊ ಕತ್ತಲೆ||
ಉತ್ತಮೋತ್ತಮ ನಿನ್ನ ಪಾದದ ಭಕ್ತಿಯೇ ಸ್ಥಿರವಲ್ಲವೇ|
ವಿತ್ತವೆಂಬುದು ಗಾಳಿಯಲ್ಲಿಹ ದೀಪದಂದದಿ ಚಂಚಲ||
ಮತ್ತರಾಗುತ ಬಿಟ್ಟು ನಿನ್ನನು ಕೆಟ್ಟ ಯೋಚನೆ ಗೈಯದಾ|
ಚಿತ್ತವಂ ನಮಗಿತ್ತು ರಕ್ಷಿಸು ಪದ್ಮನಾಭ ಸುರೇಶನೇ||
ಆಡುವಾಗಲು ನಾವು ಭೋಜನ ಮಾಡುವಾಗಲು ಸರ್ವದಾ|
ನೋಡಿ ನೀ ದಯದಿಂದ ನಮ್ಮನು ಪಾಲಿಸೈ ಭಗವಂತನೇ||
ಬೇಡಿಕೊಂಬೆವು ನಮ್ಮ ದೇಹಕೆ ಸೌಖ್ಯವಂ ಬಲ ಪುಷ್ಟಿಯಂ|
ನೀಡು ನಿನ್ನಯ ಪಾದಭಕ್ತಿಯನೆಂದಿಗೂ ಬಿಡಲಾರೆವು||
ನಿನ್ನ ದರ್ಶನಗೈವ ನೇತ್ರದ ಜನ್ಮ ಸಾರ್ಥಕವಲ್ಲವೇ|
ನಿನ್ನ ಪೂಜಿಪ ಹಸ್ತವೇ ಬಲುದೊಡ್ಡದಲ್ಲವೆ ದೇವನೇ||
ನಿನ್ನ ನಾಮವ ಪೇಳ್ವ ನಾಲಗೆ ಧನ್ಯವಲ್ಲವೆ ಸರ್ವದಾ|
ನಿನ್ನ ಜಾನಿಪ ಚಿತ್ತವೃತ್ತಿಯೆ ಯೋಗ್ಯವಲ್ಲವೆ ಲೋಕದಿ||
ನೀನೆ ತಾಯಿಯು ನೀನೆ ತಂದೆಯು ನೀನೆ ನಮ್ಮೊಡನಾಡಿಯೂ|
ನೀನೆ ಬಂಧುವು ನೀನೆ ಭಾಗ್ಯವು ನೀನೆ ವಿದ್ಯೆಯು ಬುದ್ಧಿಯೂ||
ನೀನು ಪಾಲಿಸದಿದ್ದರೆಮ್ಮನು ಬೇರೆ ಪಾಲಿಪರಿಲ್ಲಲೈ|
ದೀನಪಾಲನೆ ನಿನ್ನ ಧೀನದೊಳಿರ್ಪನಮ್ಮನು ಪಾಲಿಸೈ||
ಶ್ರೀಮುಕುಂದನೆ ಗಾಳಿಯಲ್ಲಿಯು ನೀರಿನಲ್ಲಿಯು ನೀನಿಹೇ|
ಭೂಮಿಯಲ್ಲಿ ಯಮಗ್ನಿಯಲ್ಲಿಯು ಬಾನಿನಲ್ಲಿಯು ನೀನಿಹೆ||
ರಾಮನೂ ನರಸಿಂಹನೂ ಪರಮಾತ್ಮ ಕೃಷ್ಣನು ನೀನೆಯೇ|
ನೀ ಮಹಾತ್ಮನು ನಮ್ಮ ತಪ್ಪುಗಳೆಲ್ಲ ಮನ್ನಿಸಿ ಪಾಲಿಸೈ||
ಸಾಹಿತ್ಯ: ಸೋಸಲೆ ಅಯ್ಯಾ ಶಾಸ್ತ್ರಿಗಳು
ಸ್ವಾಮಿ ದೇವನೆ ಲೋಕ ಪಾಲನೆ,
ತೇ ನಮೋಸ್ತು ನಮೋಸ್ತು ತೇ |
ಪ್ರೇಮದಿಂದಲಿ ನೋಡು ನಮ್ಮನು
ತೇ ನಮೋಸ್ತು ನಮೋಸ್ತು ತೇ || ||ಪ||
ದೇವದೇವನೆ ಹಸ್ತಪಾದಗಳಿಂದಲೂ, ಮನದಿಂದಲೂ,
ನಾವು ಮಾಡಿದ ಪಾಪವೆಲ್ಲವ ಹೋಗಲಾಡಿಸು ಬೇಗನೆ ||ಸ್ವಾಮಿ…||
ವಿಜಯ ವಿದ್ಯಾರಣ್ಯ ಕಟ್ಟಿದ ಚಾಮುಂಡಾಂಬೆಯ ನಾಡಿನ,
ಮನೆಯ ಮಕ್ಕಳ ಐಕ್ಯಗಾನವ ಲಾಲಿಸಿ, ಪರಿಪಾಲಿಸೈ ||ಸ್ವಾಮಿ…||
ನಿನ್ನೊಲುಮೆ ನಮಗಿರಲಿ ತಂದೆ
ಕೈಹಿಡಿದು ನೀ ನಡೆಸು ಮುಂದೆ || ಪ ||
ತಾನುರಿದು ಜಗಕೆಲ್ಲ ಜ್ಯೋತಿಯನು ನೀಡುವ
ದೀಪದೊಳು ನಿನೆಮ್ಮ ಅನುಗ್ರಹಿಸು ತಂದೆ
ಕಾನನದ ಸುಮವೊಂದು ಸೌರಭವ ತಾ ಸೂಸಿ
ಸಫಲತೆಯ ಪಡೆವಂತೆ ಮಾಡೆಮ್ಮ ತಂದೆ
ಸಿರಿಯು ಸಂಪದ ಬೇಡ, ಯಾವ ವೈಭವ ಬೇಡ
ನಿನ್ನ ಕರುಣೆಯೇ ಒಂದು ಸಾಕೆಮಗೆ ತಂದೆ || ೧ ||
ನಿನ್ನ ಈ ಮಕ್ಕಳನು ಪ್ರೇಮದಲಿ ನೀ ನೊಡು
ಈ ಮನೆಯು ಎಂದೆಂದು ನಗುವಂತೆ ಮಾಡು
ನಂಬಿದರೆ ಭಯವಿಲ್ಲ ನಂಬದಿರೆ ಬಾಳಿಲ್ಲ
ಅಂಬಿಗನೆ ನೀ ನಡೆಸು ಈ ಬಾಳ ನೌಕೆ
ಯಾವ ನೋವೇ ಬರಲಿ ಎದೆಗುಂದದಿರಲಿ
ಸತ್ಯ ಮಾರ್ಗದಿ ನಡೆವ ಶಕ್ತಿ ಕೊಡು ತಂದೆ || ೨ ||
ಹೂವಲ್ಲಿ ಜೇನು ಗುಡಿ ಕಟ್ಟದೇನು?
ನೀರಲ್ಲಿ ಮೀನು ಅಡಿ ಮುಟ್ಟದೇನು?
ಆ ದೈವದಾಗ್ನೇನೆ ಎಲ್ಲಾನು
ಹೇ ಶಾರದೆ… ದಯಪಾಲಿಸು
ಈ ಬಾಳನು… ಬೆಳಕಾಗಿಸು
ಹೇ ಶಾರದೆ… ದಯಪಾಲಿಸು
ಈ ಬಾಳನು… ಬೆಳಕಾಗಿಸು
ನಾಳೆಗಳ… ದಾರಿಯಲಿ…
ನಂಬಿಕೆಯ ನೆಲೆಯಾಗಿರಿಸು
ಮುನ್ನಡೆಸು. ಕೈ ಹಿಡಿದು
ನಾವಾಡೊ ಪದಪದದಲ್ಲೂ ಸಂಚರಿಸು
ಹೂವಲ್ಲಿ ಜೇನು ಗುಡಿ ಕಟ್ಟದೇನು?
ನೀರಲ್ಲಿ ಮೀನು ಅಡಿ ಮುಟ್ಟದೇನು?
ಆ ದೈವದಾಗ್ನೇನೆ ಎಲ್ಲಾನು
ಹೇ ಶಾರದೆ… ದಯಪಾಲಿಸು
ಈ ಬಾಳನು… ಬೆಳಕಾಗಿಸು
ಹೇ ಶಾರದೆ…
ನಾಟ್ಯ ಅನ್ನೋದು ನಾದಾಂತರಂಗ ತಾನೆ
ನಾದ ಅನ್ನೋದು ಭಾವಾಂತರಂಗಾನೆ
ಶಿಲೆಯಿಂದ ತಾನೆ ಕಲೆಗೆ ಮತಿ
ಕಲೆ ಇಂದ ಶಿಲೆಗೆ ಕುಂಚಾರತಿ
ಪ್ರತಿಯೊಂದರಲ್ಲೂ ಅವನ ಅಣತಿ
ಒಲವಿಂದ ತಾನೆ ಸುಖ ಸಮ್ಮತಿ
ಈ ಲೋಕವೇ ರಂಗ ಭೂಮಿ
ತಂತಾನೆ ನಡೆಯುತ್ತೆ ಸ್ವಾಮಿ
ಪಾಲಿಗೆ ಬಂದಂತ ಪಾತ್ರಾನ ಎಲ್ಲಾರು ಜೀವಂತಿಸಿ
ಹೇ ಶಾರದೆ… ದಯಪಾಲಿಸು
ಈ ಬಾಳನು… ಬೆಳಕಾಗಿಸು
ಹೇ ಶಾರದೆ…